ನಂಬಿ ಕೆಟ್ಟವರಿಲ್ಲವೋ.........

|

Engineering ಎಂಟನೇ semester ಮುಗಿಸಿ ಪರೀಕ್ಷೆಯ ಫಲಿತಾಂಶ ಕಾದುನೋಡುತಿದ್ದೆ ,ಪ್ರತಿಸರದ ತರಹ ಮತ್ತೊಮ್ಮೆ revaluation ಆಮೇಲೆ challenge revaluation ಹಾಕೋದನ್ನ ಕಾದುನೋಡುತಿದ್ದೆ ,ಅಷ್ಟೊಂದು ನಂಬಿಕೆ ನನಗೆ ನನ್ನ ಮೇಲೆ. ಬೆಳಿಗ್ಗೆ ಗಾಢವಾದ old  monk ನಿದ್ದೆಯಲ್ಲಿದ್ದಾಗ  ಗೆಳೆಯನೊಬ್ಬ ನನ್ನ nokia ೩೩೦೦  smart phone ಗೆ ಕರೆ  ಮಾಡಿ result ಬಂದದ ನೋಡಲೇ ಅಂದ . ಆಗಿನ್ನೂ internet parlour ಗಳ ಕಾಲ, ಅಂತೂ ಧೈರ್ಯಮಾಡಿ ದೇವರೇ ಇದೆ ನನ್ನ ಕೊನೆ result ಅಗಲಪ್ಪಾ ಅಂತ ಕೇಳಿಕೊಂಡು ನೋಡಿದೆ ಅರೆ ಎಲ್ಲ pass pass . ನನ್ನ table mate ಸತ್ಯಬೋಧ್ ನಿಗೆ ಫೋನ್ ಮಾಡಿ "ದೋಸ್ತ  ಎಲ್ಲ ಪಾಸ್ ಈ ಸರ್ರೆ " ಅಂದೇ , ಮಾಮ(ಗೆಳೆಯರು ನನ್ನನ್ನು ಪ್ರೀತಿಯಿಂದ ಕರೆಯುವ ಹೆಸರು ) "ಇನ್ನು ಇಳದಿಲ್ಲೇನು  ರಾತ್ರಿದು ಅಂದ". ಅಶ್ಟಕ್ಕೇ ಸಾಬೀತಾಯಿತು ನನಗೆ ನನ್ನ ಮೇಲಿರುವ ನಂಬಿಕೆ = ನನ್ನ ಗೆಳೆಯರಿಗೆ ನನ್ನ ಮೇಲಿರುವ ನಂಬಿಕೆ ,ವಾಹ್ ಏನು ಗೆಳೆತನ .ಬೆಳಗಾವಿಯಲ್ಲಿದ್ದ ನನ್ನ ತಂದೆಗೆ ಫೋನ್ ಮಾಡಿ "ಅಪ್ಪ ಈ ಸರೆ ಎಲ್ಲಾ paas ಆಗೀನಿ ಅಂದೇ" ಅದಕ್ಕೆ ಅವರು "ಎಲ್ಲಾರೂ ೯ ರಾಗ್ ಹುಟ್ಟತಾರ ನೀ ೮ ರಾಗ್ ಹುಟ್ಟಿದಿ ಬಿಡು ಕಂಗ್ರಾಟ್ಸ್ anayways ಅಂದರು"(ಮಗ ಎಂಟನೇ semester ನಲ್ಲಿ  ಎಲ್ಲ subject pass ಅಗಿದ್ದಕ್ಕೆ ) .

ಹತ್ತಿರದ ರಾಘವೇಂದ್ರ ಉಪಹಾರ ದಲ್ಲಿ ಬಿಸಿ ಇಡ್ಲಿ ವಡೆ ಹೊಟ್ಟೆಗೆ ಇಳಿಸಿ ಒಂದು king's ಸಿಗರೇಟ್ ತೊಗೊಂಡು ನಮ್ಮ ರೂಮಿನೆ ಕಟ್ಟೆ ಮೇಲೆ ದುಮ್ ಎಳೆಯುತ್ತಿದ್ದೆ , ಪಿತಾಶ್ರಿ phone ಬಂತು "ಇನ್ನೊಂದು ಸರತಿ internet parlour ಹೋಗಿ result ನೋಡಿ ಬಾ, just to double check  " ಅಂದರು .

ಅಲ್ಲಿಗೆ ಶ್ರೀ ರಮಾರಮಣ ಗೋವಿಂದಾ ಗೋವಿಂದ ......



Search

Widget Text